ಓಂ ಶ್ರೀ ಗುರುಭ್ಯೋ ನಮಃ
ನಮ ಓಂ ವಿಷ್ಣುಪಾದಾಯ ಕೃಷ್ಣ ಪ್ರಷ್ಠಾಯ ಭೂತಲೇ
ಶ್ರೀಮತೇ ಜಯಪತಾಕ ಸ್ವಾಮಿನ್ ಇತಿ ನಾಮಿನೇ
ನಮೋ ಆಚಾರ್ಯ ಪಾದಾಯ ನಿತಾಯ್ ಕೃಪ ಪ್ರದಾಯಿನೇ
ಗೌರ ಕಥಾ ಧಾಮದಾಯ ನಗರ ಗ್ರಾಮ ತಾರಿಣೆ
ನಮ ಓಂ ವಿಷ್ಣುಪಾದಾಯ ಕೃಷ್ಣ ಪ್ರಷ್ಠಾಯ ಭೂತಲೇ
ಶ್ರೀಮತೇ ಭಕ್ತಿ ವೇದಾಂತ ಸ್ವಾಮಿನ್ ಇತಿ ನಾಮಿನೇ
ನಮಸ್ತೇ ಸರಸ್ವತೇ ದೇವೇ ಗೌರ ವಾಣಿ ಪ್ರಚಾರಿಣೆ
ನಿರ್ವಿಶೇಷ ಶೂನ್ಯ ವಾದಿ ಪಾಶ್ಚ್ಯಾತ್ಯ ದೇಶ ತಾರಿಣೆ
ಜೈ ಶ್ರೀ ಕೃಷ್ಣ ಚೈತನ್ಯ ಪ್ರಭು ನಿತ್ಯಾನಂದ ಶ್ರೀ ಅದ್ವೈತ ಗಧಾಧರ ಶ್ರೀವಾಸಾದಿ ಗೌರ ಭಕ್ತ ವೃಂದ.
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ||
ನನ್ನ ಪ್ರೀತಿಯ ಗುರುಗಳಾದಂತಹ ಗುರು ಮಹಾರಾಜ್ ಜಯಪತಾಕ ಸ್ವಾಮಿಗಳಿಗೆ ನನ್ನ ಹೃತ್ಪೂರ್ವಕ ಶಿರ ಸಾಷ್ಟಾಂಗ ವಂದನೆಗಳನ್ನು ಸಲ್ಲಿಸುತ್ತಾ (ಶ್ರೀಪಾದ ರಾಜಂ ಶರಣಂ ಪ್ರಪದ್ಯೇ) ನಿಮ್ಮ ಪಾದ ಕಮಲಗಳಿಗೆ.
ನಮ್ಮ ಮಗ ಜಿತೇಂದ್ರ ಕುಮಾರ 3 ವರ್ಷಗಳ ಹಿಂದೆ ಬೇರೆ ರೂಮ್ ಮಾಡಿಕೊಂಡು ಕೆಲಸಕ್ಕೆ ಹೋಗಿ ಬರುತ್ತಿದ್ದನು. ಒಂದು ದಿನ ಹೀಗೆ ಅವನಿಗೆ NRJD ಇಸ್ಕಾನ್ ನಿಂದ ಮಾಹಿತಿ ದೊರೆತು, ಇಸ್ಕಾನಿಗೆ ಓಡಾಡಿಕೊಂಡು ಇರುತ್ತಿದ್ದನು. ಈಗಲೂ ಸಹ ಅಲ್ಲಿಯೇ ರೂಮ್ ಮಾಡಿಕೊಂಡು ಮಂಗಳ ಆರತಿಗೆ ಹೋಗುತ್ತಿದ್ದಾನೆ. ಅಲ್ಲಿಯೇ ಸೇವೆಗಳನ್ನು ಮಾಡಿಕೊಂಡು ಮನೆ ಕಡೆ ಓಡಾಡಿಕೊಂಡು ಇದ್ದಾನೆ. ಅವನಲ್ಲಿ ಎಷ್ಟು ಬದಲಾವಣೆಗಳಾಗಿವೆ ಎನ್ನುವುದು ಹೇಳಲು ಅಸಾಧ್ಯ. "ಗುರುವೇ ನಿಮ್ಮ ಆಶೀರ್ವಾದ" ಅವನಿಗೆ ನೆಮ್ಮದಿ ತರುತ್ತಿದೆ. ಅವನ ಆಸೆ ಆಕಾಂಕ್ಷೆಗಳೇ ನನಗೆ ಸಂತೋಷ ತರುತ್ತಿದೆ. ಸದಾ ನಮ್ಮ ಮಗನ ಮೇಲೂ, ನಮ್ಮ ಮೇಲೂ ಮತ್ತು ಅನಂತ ಕೋಟಿ ವೈಷ್ಣವರ ಭಕ್ತರ ಮೇಲೂ NRJD ಕುಟುಂಬದ ಮೇಲೂ ನಿಮ್ಮ ಕರುಣೆ ಪ್ರೀತಿ ವಾತ್ಸಲ್ಯ ಸದಾ ಇರಲಿ. ನಮಗೂ ಸಹ ಇನ್ನೂ ಶೃದ್ಧೆ, ಭಯ, ಭಕ್ತಿ ನಿಮ್ಮನ್ನು ಇನ್ನೂ ನೆನೆಯುವಂತೆ ಮಾಡಿ. ನನಗೆ ಗುರುವೆಂದರೆ ಚಿಕ್ಕವಳಿರುವಾಗಿನಿಂದ ತುಂಬಾ ಇಷ್ಟ ಪಡುತ್ತೇನೆ. ಈಗಲೂ ಸಹ ಸಂಸಾರದ ಜಂಜಾಟದಿಂದ ನನಗೆ ಸರಿಯಾಗಿ ಆಚರಣೆ ಮಾಡಲಾಗುತ್ತಿಲ್ಲ. ನನಗೂ ನನ್ನ ಪತಿದೇವರಿಗೂ (ಲೀಲಾವತಿ, ಮಂಜುನಾಥ) ಆರೋಗ್ಯದಲ್ಲಿ ತೊಂದರೆ ಇರುತ್ತದೆ. ನಮ್ಮ ಯಜಮಾನರಿಗೆ ಹೊರಗಡೆಯಿಂದ, ಬೇರೆಯವರಿಂದ ದುಡ್ಡು ಬರಬೇಕಾಗಿದೆ. ಅವರು ಮಾನಸಿಕವಾಗಿ ಹಿಂಸೆ ಪಡುತ್ತಿದ್ದ್ದಾರೆ. ಅವರಿಗೆ ನೆಮ್ಮದಿ ಸಿಗಬೇಕು. ನಿಮ್ಮನ್ನು ಹಾಗೂ ಹರೇ ಕೃಷ್ಣ ಜಪವನ್ನು ನೆನೆಯುವಂತಹ ಮಾರ್ಗವನ್ನು ತೋರಿಸಿಕೊಡಿ ಪ್ರಭು. ಈಗಾಗಲೇ ದಿವಸಕ್ಕೆ 16 ಮಾಲೆ ಮಾಡುತ್ತಿದ್ದೇನೆ. ಇನ್ನು ಚೆನ್ನಾಗಿ ಭಕ್ತಿಯಿಂದ ಮಾಡುವಂತಹ ಮನಸ್ಸು ಬರಬೇಕು. ಆ ತರಹ ನೀವು ಎಲ್ಲಿ ಇರುತ್ತೀರೋ, ಅಲ್ಲಿಂದಲೇ ನನಗೆ ಆಶೀರ್ವಾದ ಮಾಡಿ ಎಂದು ನಾನು ನಿಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.
ನೀನೆ ನನ್ನ ಗುರುವು| ನೀನೆ ನನ್ನ ಇರುವು|
ನೀನೆ ನನ್ನ ದೈವವು| ನೀನೆ ನನ್ನ ಜೀವವು ||ಪ||
ನೀನೆ ನನ್ನ ಮಾತಾ| ನೀನೆ ನನ್ನ ದಾತಾ|
ನೀನೆ ನನ್ನ ಬಂಧು ಬಳಗ| ನೀನೆ ಎಲ್ಲವೂ|| 1 ||
ನೀನೆ ನನ್ನ ಜ್ಯೋತಿ| ನೀನೆ ನನ್ನ ಆರತಿ|
ನೀನೆ ನನ್ನ ಕೀರುತಿ| ನೀನೆ ನನ್ನ ಸಾರಥಿ|| 2 ||
ಮುಂದೆ ದಾರಿ ತೋರದಯ್ಯ| ಎಲ್ಲೆಲ್ಲೂ ಕತ್ತಲಯ್ಯ|
ಬೆಳಕು ತೋರಿ ಎನ್ನನ್ನು ಮುನ್ನಡೆಸು ಬಾರಯ್ಯ|| 3 ||
ಮುಕ್ತಿ ಬೇಡಿ ಬಂದೆ| ಕೃಪೆಯ ಕೋರಿ ನಿಂದೆ|
ನಿನ್ನ ಹರಕೆ ಒಂದೆ ಸಾಕೆನಗೆ ತಂದೆ|| 4 ||
ಎಲ್ಲೆಲ್ಲೂ ನೀ ತುಂಬಿರುವೆ| ನನ್ನಲ್ಲೂ ನೀನಿರುವೆ|
ತನಗೆ ತಾನಾಗಿರುವೆ ಓ ಘನಗುರುವೆ|| 5 ||
ನಿನ್ನ ಹರಕೆ ನನಗೆ ರಕ್ಷೆ| ನಿನ್ನ ನಾಮವೆ ದೀಕ್ಷೆ|
ನಿನ್ನ ದಾರಿ ನನಗೆ ನಕ್ಷೆ ಮತ್ತೆ ಭವಕೆ ಬರುವುದೆ ಶಿಕ್ಷೆ|| 6 ||
ನಿನ್ನ ಅನುಗ್ರಹವಿರದೆ ನಾ ಉಸಿರಾಡಲಾರೆ
ನಿನ್ನ ಆಶೀರ್ವಾದವಿರದೆ ಮುನ್ನಡೆಯಲಾರೆ|| 7 ||
ಜಪವು ಎನಗೆ ಗೊತ್ತಿಲ್ಲ| ತಾಪವು ಎನಗೆ ಬರುವುದಿಲ್ಲ|
ನೀ ಕೈಯ ಬಿಟ್ಟರೆ ಎನ್ನ ಕಾಯುವರಿಲ್ಲ|| 8 ||
ಈ ಭವ ಶೂನ್ಯ ನೀ ಮಾಡು ಧನ್ಯ|
ನಿನ್ನ ಕೃಪೆಯು ಎನ್ನ ಮೇಲೆ ಇರಲಿ ಅನನ್ಯ|| 9 ||
ಜಗತ್ತಿಗೆ ನೀನು ತಂದೆ| ಎಲ್ಲಾ ಮಕ್ಕಳು ನಿನಗೊಂದೆ
ಕೃಪೆಯ ಕೋರಿ ಬಂದೆ| ಮುಕ್ತಿ ನೀಡು ಇಂದೆ || 10 ||
ಕಾಡು ಪಾಪಿ ನಾನಯ್ಯ| ಸರ್ವ ಶಕ್ತ ನೀನಯ್ಯ|
ದಾರಿ ತೋರು ಕನ್ನಯ್ಯ| ಶ್ರೀ ಗುರುವೇ ಜಯಪತಾಕ ಸ್ವಾಮಿ
N. ಲೀಲಾವತಿ, SN. ಮಂಜುನಾಥ, ಜೀತೆಂದ್ರ ಕುಮಾರ ಮತ್ತು ಕುಟುಂಬ ವರ್ಗ